ಮಸ್ತ್ ಮಜಾ ಮಾಡಿ ೨೦೦೮ ರ ಕನ್ನಡ ಹಾಸ್ಯ ಚಲನಚಿತ್ರವಾಗಿದ್ದು, ಸುದೀಪ್, ವಿಜಯ್ ರಾಘವೇಂದ್ರ, ದಿಗಂತ್, ನಾಗ ಕಿರಣ್, ಕೋಮಲ್ ಮತ್ತು ಜೆನ್ನಿಫರ್ ಕೊತ್ವಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆರ್. ಅನಂತ್ ರಾಜು ನಿರ್ದೇಶಿಸಿದ್ದಾರೆ. ಚಿತ್ರವು ಹಿನ್ನೆಲೆ ಸಂಗೀತವನ್ನು ಪಿಬಿ ಬಾಲಾಜಿ ಸಂಯೋಜಿಸಿದ್ದಾರೆ ಮತ್ತು ಕೆ. ರಾಮ್ ನಾರಾಯಣ್ ಅವರ ಸಾಹಿತ್ಯವನ್ನು ಒಳಗೊಂಡಿದೆ.ಇದು ೨೦೦೭ ರ ಹಿಂದಿ ಹಾಸ್ಯ ಚಲನಚಿತ್ರ ಧಮಾಲ್ ನ ರಿಮೇಕ್ ಆಗಿದ್ದು, ಆರಂಭಿಕ ದೃಶ್ಯಗಳನ್ನು ೨೦೦೬ ರ ಹಾಸ್ಯ ಚಲನಚಿತ್ರ ಗೋಲ್ಮಾಲ್: ಫನ್ ಅನ್ಲಿಮಿಟೆಡ್ ನಿಂದ ತೆಗೆದುಕೊಳ್ಳಲಾಗಿದೆ. == ಕಥಾವಸ್ತು == ಮಸ್ತ್ ಮಜಾ ಮಾಡಿ ಊಟಿಯ ಸಸ್ಯೋದ್ಯಾನದ ಜಾಗದಲ್ಲಿ ನಿಧಿಯನ್ನು ಹುಡುಕುವ ನಾಲ್ವರು ನಿರುದ್ಯೋಗಿ ಯುವಕರ ಕಥೆಯಾಗಿದೆ. ಇವರಲ್ಲದೆ ಒಬ್ಬ ಪೊಲೀಸ್ ಅಧಿಕಾರಿಯೂ ನಿಧಿಯ ಮೇಲೆ ಕಣ್ಣಿಟ್ಟಿದ್ದಾನೆ. ನಿಧಿಯನ್ನು ತಮ್ಮದಾಗಿಸಿಕೊಳ್ಳಲು ಯುವಕರ ಪ್ರಯತ್ನಗಳು ಮತ್ತು ಅವರ ಕಾರ್ಯಾಚರಣೆಯಲ್ಲಿ ಅವರು ಎದುರಿಸುವ ಅಡಚಣೆಗಳು ಕಥೆಯ ತಿರುಳನ್ನು ರೂಪಿಸುತ್ತವೆ == ತಾರಾಗಣ == ಎಸಿಪಿ ಪ್ರತಾಪ್ ಪಾತ್ರದಲ್ಲಿ ಸುದೀಪ್ ರಾಮು ಪಾತ್ರದಲ್ಲಿ ವಿಜಯ್ ರಾಘವೇಂದ್ರ ಕಾಮೇಶ್ ಪಾತ್ರದಲ್ಲಿ ದಿಗಂತ್ ಶ್ಯಾಮ್ ಆಗಿ ನಾಗ ಕಿರಣ್ ಮೈಲಾರಿಯಾಗಿ ಕೋಮಲ್ ಸಹನಾ ಪಾತ್ರದಲ್ಲಿ ಜೆನ್ನಿಫರ್ ಕೊತ್ವಾಲ್ ಕಾಮೇಶನ ತಂದೆ ಸೋಮನಾಥ ತಂತ್ರಿಯಾಗಿ ರಂಗಾಯಣ ರಘು ಕೀರ್ತಿ ಬೇಡಿ, ಪೊಲೀಸ್ ಕಮಿಷನರ್ ಪಾತ್ರದಲ್ಲಿ ಉಮಾಶ್ರೀ ಬಾಂಡ್ ಡಿಕೆ ಆಗಿ ಸಾಧು ಕೋಕಿಲಾ ಟೆನ್ನಿಸ್ ಕೃಷ್ಣ ಸಮರಸಿಂಹ ರೆಡ್ಡಿಯಾಗಿ ಸಿಹಿ ಕಹಿ ಚಂದ್ರು ಮನಿಲಿಂಕ್ ಶಾಸ್ತ್ರಿಯಾಗಿ ಆರ್.ಎನ್.ಸುದರ್ಶನ್ ನಾಗಶೇಖರ್ ಶಂಕರ್ ರಾವ್ ಕಾಲೇಜು ಪ್ರಿನ್ಸಿಪಾಲ್ "ಬೇಕುಪಾ" - ಬೇಡರಹಳ್ಳಿ ಕುಮಾರಪ್ಪನ ಮಗ ಪಾಲಾಕ್ಷಪ್ಪ ಬುಲೆಟ್ ಪ್ರಕಾಶ್ ಹರಿ ನವರತನ್ ಪಾತ್ರದಲ್ಲಿ ಆರ್.ಅನಂತರಾಜು ಕೆ. ರಾಮ್ ನಾರಾಯಣ್ ಬೆಂಗಳೂರು ಅಮ್ಜದ್ ಖಾನ್ ಮನದೀಪ್ ರೈ ಶಾಂತಮ್ಮ === ಅತಿಥಿ ಪಾತ್ರಗಳು === "ಶಕಲಕ ಭೂಮ್" ಹಾಡಿನಲ್ಲಿ ಕೆಳಗಿನ ನಟ-ನಟಿಯರು ತಮ್ಮದೇ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಉಪೇಂದ್ರ ರೇಖಾ ವೇದವ್ಯಾಸ್ ಶರ್ಮಿಳಾ ಮಾಂಡ್ರೆ ಸಂಜನಾ ಶೆರಿನ್ ಗೌರಿ ಮುಂಜಾಲ್ ಸುಮನ್ ರಂಗನಾಥ್ ರಾಗಿಣಿ ದ್ವಿವೇದಿ ಐಂದ್ರಿತಾ ರೇ ಕೀರ್ತಿ ಚಾವ್ಲಾ == ಧ್ವನಿಮುದ್ರಿಕೆ == ಪಿಬಿ ಬಾಲಾಜಿ ಸಂಗೀತ ಸಂಯೋಜಿಸಿದ್ದು, "ಅಕ್ಷಯ ಆಡಿಯೋ" ಬಿಡುಗಡೆ ಮಾಡಿದೆ. == ಬಿಡುಗಡೆ ಮತ್ತು ಪ್ರತಿಕ್ರಿಯೆ == ಮಸ್ತ್ ಮಜಾ ಮಾಡಿ ೧೨ ಡಿಸೆಂಬರ್ ೨೦೦೮ ರಂದು ಭಾರತದಲ್ಲಿ ಬಿಡುಗಡೆಯಾಯಿತು. "ನಿಮ್ಮ ಥಿಂಕಿಂಗ್ ಕ್ಯಾಪ್ ಪಕ್ಕಕ್ಕಿಟ್ಟು ಸುಮ್ಮನೆ ಎಂಜಾಯ್ ಮಾಡಿ" ಎಂದು ಬೆಂಗಳೂರು ಮಿರರ್ ಅಭಿಪ್ರಾಯಪಟ್ಟಿದೆ. ರೆಡಿಫ್ ಡಾಟ್ ಕಾಮ್ ನ ಆರ್.ಜಿ.ವಿಜಯಸಾರಥಿಯವರು "ಮಸ್ತ್ ಮಜಾ ಮಾಡಿ ,ನಿಮಗೆ ಕಾಮಿಡಿ ಇಷ್ಟವಿದ್ದರೆ ಟೈಂಪಾಸ್ ಚಿತ್ರ" ಎಂದು ಬರೆದಿದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಮಸ್ತ್ ಮಜಾ ಮಾಡಿ @ ಐ ಎಮ್ ಡಿ ಬಿ ಮಸ್ತ್ ಮಜಾ ಮಾಡಿ